ಕಪ್ಪುಕೋತಿ : ಪ್ರೈಮೇಟುಗಳ ಗಣದ ಕ್ಯಾಟರೈನಿ ಬುಡಕಟ್ಟಿನ ಸೈನೋಪಿತಿಕಾಯಿಡೀ ಕುಟುಂಬಕ್ಕೆ ಸೇರಿದ ಸೈನೋಪಿತಿಕಸ್ ನೈಜರ್ ಎಂಬ ಶಾಸ್ತ್ರೀಯ ಕಾಣಬರುತ್ತದೆ. ನೋಡುವುದಕ್ಕೆ ಬೆಲೂನ್  ಕೋತಿಯಂತೆಯೇ ಇದೆ. ದೇಹದ ಗಾತ್ರ, ನಿಲ್ಲುವ ಭಂಗಿ, ದಪ್ಪ ಮತ್ತು ಪ್ರಮುಖವಾದ ಹುಬ್ಬುಗಳು, ನಾಯಿಯಂಥ ಮೂತಿ, ತೆಳುವಾದ ಉದ್ದನೆಯ ನಾಸಿಕ ಮತ್ತು ಕಣ್ಣುಗಳ ಕೆಳಗೆ ಮೂಗಿನ ಎರಡೂ ಪಕ್ಕಗಳಲ್ಲಿ ಇರುವ ರೋಮರಹಿತ ಕಪ್ಪು ಚರ್ಮದ ಉಬ್ಬು-ಇವುಗಳಲ್ಲೆಲ್ಲ ಬೆಬೂನ್ ಕೋತಿಯನ್ನು ಹೋಲುತ್ತದೆ. ಮೈ ಕಾಡಿಗೆಗಪ್ಪು ಬಣ್ಣದ್ದು. ಒತ್ತಾಗಿ ಬೆಳೆದ ಕೂದಲುಗಳಿಂದ ಕೂಡಿದ ಚರ್ಮ ಮತ್ತು ತಲೆಯ ಮೇಲೆ ಉದ್ದವಾದ ಬಿರುಸಾದ ಕೂದಲುಗಳು ಇವೆ. ಬೇಕೆಂದಾಗ ಕೋತಿ ಈ ಕೂದಲುಗಳನ್ನು ನಿಮಿರಿಸಿ ಶತ್ರುಗಳನ್ನು ಹೆದರಿಸಲು ವಿಲಕ್ಷಣ ರೂಪ ತಾಳುವುದು. ಇದು ಬಹಳ ಬುದ್ಧಿವಂತ ಪ್ರಾಣಿಯೆಂದು ಹೆಸರಾಗಿದೆ. ನಮ್ಮಲ್ಲಿರುವ ಕೋತಿ ಮೊಸಳೆಯ ಕತೆಯಷ್ಟೆ ಚತುರವಾದ ಕತೆಗಳು ಇದರ ಬಗ್ಗೆ ಇವೆ. ಸೆಲೆಬಸ್ ದ್ವೀಪವಾಸಿಗಳು ಇವನ್ನು ಬಹಳ ಪುಜ್ಯಭಾವನೆಯಿಂದ ನೋಡುತ್ತಾರೆ. ಅಲ್ಲದೆ ಮಾನವರಿಗಿಂತಲೂ ಇವು ಶ್ರೇಷ್ಠವೆಂತಲೂ ತಾವು ಇವುಗಳ ವಂಶಜರೆಂದೂ ಹೇಳಿಕೊಳ್ಳುತ್ತಾರೆ.    	(ಎಚ್.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ